/newsfirstlive-kannada/media/post_attachments/wp-content/uploads/2024/06/VIRAT_KOHLI_1.jpg)
ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಫೈನಲ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ. ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ 76 ರನ್ ಸಿಡಿಸಿ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಪಡೆದುಕೊಂಡರು.
ಟೀಮ್ ಇಂಡಿಯಾ ಗೆಲ್ಲಲು ಒಂದು ರೀತಿ ಕೊಹ್ಲಿಯೇ ಕಾರಣ ಎಂದರು ತಪ್ಪಾಗಲಾರದು. ನಾಕೌಟ್ ಸ್ಟೇಜ್ ಪಂದ್ಯಗಳಲ್ಲಿ ಫೇಲ್ಯೂರ್ ಆದ ಕೊಹ್ಲಿ ಫೈನಲ್ ಮ್ಯಾಚ್ನಲ್ಲಿ ಮಹತ್ವದ 76 ರನ್ಗಳ ಕಲೆ ಹಾಕಿದ್ರು. ಇವರ ಬಗ್ಗೆ ಈಗ ಪಾಕ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಮಾತಾಡಿದ್ದಾರೆ.
ವಿರಾಟ್ ಕೊಹ್ಲಿ ಸೂಪರ್ ಸ್ಟಾರ್. ಎರಡು ರೀತಿ ಬ್ಯಾಟರ್ಗಳು ಇರುತ್ತಾರೆ. ಒಬ್ಬರು ಟೀಮ್ ಸಂಕಷ್ಟಕ್ಕೆ ಸಿಲುಕಿದಾಗ ಎಸ್ಕೇಪ್ ಆಗೋರು, ಮತ್ತೊಬ್ಬರು ಜವಾಬ್ದಾರಿ ತೆಗೆದುಕೊಂಡು ಗೆಲ್ಲಿಸೋರು. ಈ ಪೈಕಿ ಕೊಹ್ಲಿ ಜವಾಬ್ದಾರಿ ತೆಗೆದುಕೊಂಡು ಗೆಲ್ಲಿಸೋ ಟೀಮ್ನಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದರು.
ಯಾವಾಗಲೂ ಬಹಳ ಒತ್ತಡ ಇರೋ ಪಂದ್ಯಕ್ಕಾಗಿ ಹುಡುಕುತ್ತಲೇ ಇರುತ್ತಾರೆ. ಮೆಲ್ಬೋರ್ನ್ನಲ್ಲಿ ನಡೆದ ಪಾಕ್ ವಿರುದ್ಧ ಪಂದ್ಯದಲ್ಲೂ ಕೊಹ್ಲಿ ಆ ಸಂದರ್ಭಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಅಂದು ಗೆಲ್ಲಿಸಿದ್ರೆ ನಾನು ಸೂಪರ್ ಸ್ಟಾರ್ ಆಗ್ತೀನಿ. ದುಡ್ಡು ಬರುತ್ತೆ, ಸೋಷಿಯಲ್ ಮೀಡಿಯಾ ನಂದು ಅನ್ನೋ ಅರಿವು ಕೊಹ್ಲಿಗೆ ಇತ್ತು. ಆದ್ದರಿಂದಲೇ ಅಂದು ಪಂದ್ಯ ಗೆಲ್ಲಿಸಿದ್ರು. ದೇವರು ಕೂಡ ಕೊಹ್ಲಿಗೆ ಸಾಥ್ ಕೊಟ್ಟರು ಎಂದರು.
"Virat Kohli looks for pressure situations to perform and become superstar...There are 2 types of batters one looks to perform in pressure situations if they succeed then money, Social media and fame everything is theirs and one scores their 40 and leaves the team in pressure " pic.twitter.com/HjvIsm8EbZ
— Gaurav (@Melbourne__82)
"Virat Kohli looks for pressure situations to perform and become superstar...There are 2 types of batters one looks to perform in pressure situations if they succeed then money, Social media and fame everything is theirs and one scores their 40 and leaves the team in pressure " pic.twitter.com/HjvIsm8EbZ
— Gaurav (@Melbourne__82) July 3, 2024
">July 3, 2024
ಇದನ್ನೂ ಓದಿ:‘ಭಾರತ ವಿಶ್ವಕಪ್ ಗೆಲ್ಲಲು ಕೊಹ್ಲಿ ಮಾತ್ರ ಕಾರಣವಲ್ಲ’- ಮತ್ತೆ ನಾಲಿಗೆ ಹರಿಬಿಟ್ಟ ಅಂಬಾಟಿ ರಾಯುಡು!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್